ಟೇಹರಾನ್
ಇರಾನಿನ ರಾಜಧಾನಿ, ಟೇಹ್‍ರಾನ್ ಓಸ್ತಾನಿನ (ಪ್ರಾಂತ್ಯ) ಮುಖ್ಯನಗರ. ಮಧ್ಯ ಪ್ರಸ್ಥಭೂಮಿಯ ಉತ್ತರದ ಅಂಚಿನ ಮೇಲೆ. ಎಲ್‍ಬುರ್ಜ್ ಪರ್ವತಗಳಿಂದ 10 ಮೈ. ಮತ್ತು ಕ್ಯಾಸ್ಪಿಯನ್ ಸಮುದ್ರದಿಂದ ಸು.65 ಮೈ. ದಕ್ಷಿಣದಲ್ಲಿ, ಸಮುದ್ರಮಟ್ಟದಿಂದ 3.800 ಮಾಧ್ಯ ಎತ್ತರದಲ್ಲಿ, ಉತ್ತರದ ಕಡೆಗೆ ಲಘುವಾಗಿ ಏರುತ್ತ ಸಾಗುವ ನೆಲದ ಮೇಲೆ ಇದೆ. ಜನ ಸಂಖ್ಯೆ 34.00.000 (1971 ಅಂ.) ಈ ನಗರದಲ್ಲಿ ಬಿಸಿಲಿನ ಬೇಗೆ ಅತಿಯಾಗಿರುತ್ತದೆ. ಜುಲೈ ತಿಂಗಳ ಗರಿಷ್ಠ ಉಷ್ಣೆತೆ 990 ಈ. ಜನವರಿಯಲ್ಲಿ 440 ಈ. ಬೇಸಗೆಯ ತಾಪದಿಂದ ತಪ್ಪಿಸಿಕೊಳ್ಳಲು ಅನೇಕರು ವಾರಾಂತ್ಯಗಳಲ್ಲಿ ಹಾಗೂ ರಜಾದಿನಗಳಲ್ಲಿ ಉತ್ತರ ಹಾಗೂ ಈಶಾನ್ಯ ದಿಕ್ಕುಗಳಿಂದ ತಂಪಿನ ಉನ್ನತ ಪರ್ವತವಲಯಗಳತ್ತ ಧಾವಿಸುತ್ತಾರೆ. ಅಲ್ಲಿಯ ನಿಸರ್ಗಸೌಂದರ್ಯವೂ ಅವರನ್ನು ಆಕರ್ಷಿಸುತ್ರದೆ. ಈಶಾನ್ಯದಲ್ಲಿ 10 ಮೈ. ದೂರದಲ್ಲಿರುವ ಲಷ್ಕರಾಕ್ ಮೇಲಣ ಬೆಟ್ಟಗಳಲ್ಲಿ ಸ್ಕೀಯಿಂಗಿಗೆ ಅವಕಾಶವುಂಟು ಪೂರ್ವ-ಈಶಾನ್ಯಕ್ಕೆ ಸು.44 ಮೈ. ದೂರದಲ್ಲಿರುವ ಡೆಮವೆಂಡ್ ಶಿಖರದ ಎತ್ತರ 18.580. ಹಿಮಾವೃತವಾದ ಈ ಶಿಖರ ನಂದಿಹೋದ ಒಂದು ಅಗ್ನಿಪರ್ವತ, ಎಲ್ಬುರ್ಜ್ ಪರ್ವತಗಳ ಅತ್ಯುನ್ನತ ಶಿಖರವಾದ ಇದನ್ನು ಸ್ವಚ್ಚ ಹವೆಯಿದ್ದಾಗ ಟೇಹ್‍ರಾನಿನಿಂದ ನೊಡಬಹುದು.

	ಟೇಹ್‍ರಾನ್ ನಗರ ಪಾಶ್ಚಾತ್ಯ ಮಾದರಿಯಲಿ ಬೆಳೆದಿದ್ದರೂ ತನ್ನ ಪ್ರಾಚೀನ ವೈಶಿಷ್ಟ್ಯಗಳನ್ನೂ ಉಳಿಸಿಕೊಂಡಿದೆ. ಈ ನಗರಕ್ಕೆ ಆರು ದಿಡ್ಡಿಬಾಗಿಲುಗಳಿವೆ. ಈ ಬಾಗಿಲುಗಳಿಂದ ಆರು ಪ್ರಮುಖ ರಸ್ತೆಗಳು ಹೊರಟು ನಗರದ ಮಧ್ಯಭಾಗದ ವ್ಯಾಪಾರಕೇಂದ್ರದಲ್ಲಿ ಕೊಡುತ್ತವೆ. ಅವುಗಳ ಎಡಬಲಗಳಲ್ಲಿರುವ ಕಿರಿಯ ರಸ್ತೆಗಳು ಸುತ್ತುಬಳಸಿನ ಸಂದಿಗೊಂದಿಗಳು.
ಈ ನಗರದ ಪ್ರಾಚೀನವೆನಿಸಿದ ಕಟ್ಟಡಗಳು ಇಲ್ಲವೇ ಇಲ್ಲವೆನ್ನಬಹುದು. ಐತಿಹಾಸಿಕ ಮಹತ್ವದ ಕಟ್ಟಡಗಳೂ ಎಲ್ಲೋ ಕೆಲವು. ತುಂಬ ಪ್ರಮುಖವಾಗಿರುವ ಕಟ್ಟಡವೆಂದರೆ ಆರ್ಕ್. ಇದರಲ್ಲಿ ಅರಮನೆ ಮತ್ತು ಕೋಟೆಗಳ ನಿರ್ಮಾಣ_ಶೈಲಿಗಳ ಸಂಗಮವನ್ನು ಕಾಣಬಹುದಾಗಿದೆಯಾದರೂ ವಾಸ್ರುಶಿಲ್ಪದ ಹಿರಿಮೆಯೇನೂ ಇಲ್ಲ. ಅಲಂಕರಣವೂ ಯಾದೃಚ್ಛಿಕ. ಗುಲಿಸ್ತಾನ್ ಅರಮನೆಯ ಷಾಹೀ ವಸ್ತುಸಂಗ್ರಹಾಲಯದಲ್ಲಿ ಅಮೂಲ್ಯ ರತ್ನಗಳೂ ರತ್ನಖಚಿತ ಚಿನ್ನದ ಗೋಳವೂ ತೈಮೂರನ ಖಡ್ಗವೂ 1739 ರಲ್ಲಿ ನಾದಿರ್‍ಷಹ ದೆಹಲಿಯಿಂದ ತಂದನೆನ್ನಲಾದ ಮಯೂರಾಸನವೂ ಸೂಸಾ ಮತ್ತು ಇತರ ಪ್ರಾಚೀನ ನಿವೇಶಗಳಲ್ಲಿ ದೊರೆತಿರುವ ಅವಶೇಷಗಳೂ ಕಾಜûರ್ ಅವಧಿಯ ಕಲಾತ್ಮಕ ಸಂಗ್ರಹಗಳೂ ಇವೆ. ನಗರದ ಕೇಂದ್ರಭಾಗದಲ್ಲಿರುವ ಮೈದಾನೀ ಸಿಪಾಹ್‍ನಲ್ಲಿ (ಸೈನಿಕರ ಮೈದಾನ) ಶಹ್ರದರಿ (ಪುರಭವನ) ಇದೆ. ಹತ್ತಿರದಲ್ಲೇ ವಿವಿಧ ಸಚಿವಾಲಯಗಳ ಕಟ್ಟಡಗಳೂ ಆಖಮೇನಿಯನ್ ಶೈಲಿಯಲ್ಲಿ ನಿರ್ಮಿಸಲಾದ ಪೊಲೀಸ್ ಕೇಂದ್ರ ಕಚೇರಿಯೂ ಇವೆ. ಮಸ್‍ಜಿದೀ ಷಾಹ್ (ರಾಜನ ಮಸೀದಿ) ಇರುವುದು ಪೇಟೆಯ ಬಳಿಯಲ್ಲೇ. ಮೈದಾನೀ ಸಿಪಾಹ್‍ನ ಪೂರ್ವ-ಈಶಾನ್ಯಕ್ಕೆ ಬಹಾರಿಸ್ತಾನ್ ಮಹಲ್ (ವಸಂತ ಮಹಲ್) ಇದೆ. ಮಜ್ಲಿಸ್ ಅಥವಾ ಸಂಸತ್ತು ಸಭೆ ಸೆರುವುದು ಇಲ್ಲೇ ಇಲ್ಲಿ ಒಂದು ಬೃಹತ್ ಗ್ರಂಥಾಲಯವೂ ಉಂಟು. ಇದರ ದಕ್ಷಿಣಕ್ಕೆ ಸಿಪಾಹ್‍ಸಾಲಾರ್ ಮಸೀದಿ (ದಂಡನಾಯಕನ ಮಸೀದಿ) ಇತ್ತು. ಈಗ ಇದನ್ನು ತತ್ತ್ವಶಾಸ್ತ್ರದ ಶಾಲೆಯನ್ನಾಗಿ ಪರಿವರ್ತಿಸಲಾಗಿದೆ. ನಗರದ ದಕ್ಷಿಣದ ಭಾಗದಲ್ಲಿ ಷಾಹೀನಿವಾಸಗಳಲ್ಲೊಂದು ಬಾಕ್_ಈ_ಮರ್‍ಮರ್ (ಅಮೃತಶಿಲಾಭವನ) ಇದೆ. ಇಸ್ಪಹಾನಿನ ಷೇಕ್ ಲುತ್ಸುಲ್ಲಾ ಮಸೀದಿಯ ಗೋಪುರದ ಮಾದರಿಯಲ್ಲೇ. ಈ ಭವನಕ್ಕೆ ಸುಂದರವಾದ ಹೆಂಚಿನ ಗೋಪುರವನ್ನು ರಚಿಸಲಾಗಿದೆ.  ನಗರದ ಆಗ್ನೇಯ ದಿಕ್ಕಿನಲ್ಲಿರುವ ಮತ್ತೊಂದು ಬೃಹತ್ ಉದ್ಯಾನವನದಲ್ಲಿ.  ಟೇಹ್‍ರಾನ್ ವಿಶ್ವವಿದ್ಯಾಲಯದ (1953) ಕಟ್ಟಡಗಳಿವೆ. ಖಿಯಾಹನೀ ಪೆಹ್ಲವಿಯ (ಪೆಹ್ಲವಿ ಸಾಲುಮರಗಳು ರಸ್ತೆ) ಬದಿಗೆ, ನಗರದ ದಕ್ಷಿಣ ಭಾಗದಲ್ಲಿ ಬೃಹತ್ ರೈಲುನಿಲ್ದಾಣವಿದೆ. ನಗರದ ಪಶ್ಚಿಮ ಅಂಚಿನ ಬಳಿಯಲ್ಲಿ ಬಾಗೀಷಾಹ್ (ರಾಜೋದ್ಯಾನ). ಸಿಪಾಯಿಗಳ ಮೈದಾನದ ದಕ್ಷಿಣಕ್ಕೆ ಬಾಗೀ ಮಿಲ್ಲೀ (ಜನತಾ ಉದ್ಯಾನ) ಇವೆ. ಇವೆರಡೂ ಸಾರ್ವಜನಿಕ ಉದ್ಯಾನಗಳು.

	ಟೇಹರಾನ್ ನಗರ ಇರಾನಿನ ರೈಲ್ವೆ  ಮತ್ತು ರಸ್ತೆಗಳ ಸಂಧಿಸ್ಥಳ. ಈ ಮಾರ್ಗಗಳು ನದೀಮುಖ ಹಾಗೂ ಕರಾವಳಿಗಳೋಡನೆಯೂ ಇರಾಕ್. ತುರ್ಕಿ ಹಾಗೂ ಸೋವಿಯತ್ ಗಡಿಗಳೊಂದಿಗೂ ಸಂಪರ್ಕ ಕಲ್ಪಿಸುತ್ತವೆ. ನಗರದ ಪಶ್ಚಿಮಕ್ಕೆ ಸುಮಾರು 5 ಮೈ. ದೂರದಲ್ಲಿರುವ ಮೆಹ್ರಬಾದಿನಲ್ಲಿ ಅಂತರರಾಷ್ಟ್ರಿಯ ವಿಮಾನ ನಿಲ್ದಾಣ ಇದೆ. ಕಾಜ್‍ವೀನ್, ತಬ್ರೀಜ್, ಆವಾಜ್, ಕಾರ್ಮಾನ್‍ಷಾ, ಇಸ್ಫಹಾನ್, ಯಾಜ್óದ್, ಜಾóಹಿದಾನ್ ಮೊದಲಾದವುಗಳೊಂದಿಗೆ ಟೇಹರಾನ್ ನಗರದ ಸಾರಿಗೆಸಂಪರ್ಕ ಏರ್ಪಟ್ಟಿದೆ.

	ಟೇಹರಾನ್ ಕೈಗಾರಿಕೆ ಮತ್ತು ವಾಣಿಜ್ಯ ಕೇಂದ್ರ, ಜವಳಿ, ಸಿಮೇಂಟ್, ಸಿಗರೇಟು, ಬೆಂಕಿಪೊಟ್ಟಣ, ಸಾಬೂನು, ಗಾಜು, ಸಣ್ಣಪುಟ್ಟ ಶಸ್ತ್ರಾಸ್ತ್ರಗಳು, ಚರ್ಮದ ಉಪಕರಣಗಳು-ಇವೇ ಮೊದಲಾದುವುಗಳಿಗೆ ಸಂಬಂಧಿಸಿದ ಅನೇಕ ಉದ್ಯಮಗಳು ಈ ನಗರದಲ್ಲಿವೆ.

	ಇಸ್ಫಹಾನ್ ಮುಂತಾದ ನಗರಗಳೊಂದಿಗೆ ಹೋಲಿಸಿದರೆ ಟೇಹರಾನ್ ಈಚಿನದೆನ್ನಬೇಕು. 9 ನೆಯ ಶತಮಾನದಲ್ಲಿ ಯಾವಾಗಲೋ ಇದು ಸ್ಥಾಪಿತವಾಗಿರಬೇಕೆಂದು ನಂಬಲಾಗಿದೆ. ಆದರೆ ಆಗ ಪ್ರವರ್ಧಮಾನ ಸ್ಥಿತಿಯಲ್ಲಿದ್ದ ರೇ ನಗರಕ್ಕೆ ಕೇವಲ 5 ಮೈ. ದೂರದಲ್ಲಿ ಇದ್ದದ್ದರಿಂದ ಇದು ಅಪ್ರಮುಖವಾಗಿತ್ತು. ಅರಬ್ ಭೂಗೋಳಶಾಸ್ತ್ರಜ್ಞ ಯಾಕೂತ್ 12 ನೆಯ ಶತಮಾನದಲ್ಲಿ ಇದಕ್ಕೆ ಯಾವುದೇ ಪ್ರಾಮುಖ್ಯವಿರಲಿಲ್ಲವೆಂದು ಹೇಳಿದ್ದಾನೆ. 1220 ರಲ್ಲಿ ಮಾಂಗೋಲರು ರೇ ನಗರವನ್ನು ನಾಶಗೊಳಿಸಿದಮೇಲೆ ಇದರ ಪ್ರಾಮುಖ್ಯ ಬೆಳೆಯಲಾರಂಭಿಸಿತು. ಸಾಫಾವಿದ್ ವಂಶದ ದೊರೆಗಳ ಕಾಲದಲ್ಲಿ (1501-1736) ಟೇಹ್‍ರಾನ್ ತಕ್ಕಮಟ್ಟಿಗೆ ಬೆಳೆಯಿತು. 18 ನೆಯ ಶತಮಾನದ ಉತ್ತರಾರ್ಧದಲ್ಲಿ ಕರೀಂ ಖಾನ್ ಚಾಂದ್ ಈ ಪಟ್ಟಣದ ಸನ್ನವೇಶವನ್ನು ಗಮನಿಸಿ. ಇದನ್ನು ತನ್ನ ರಾಜಧಾನಿಯಾಗಿ ಮಾಡಿಕೊಳ್ಳಬೇಕೆಂದು ಸ್ವಲ್ಪಕಾಲ ಯೋಚಿಸುತ್ತಿದ್ದ. ಆದರೆ ಅವನು ಅಂತಿಮವಾಗಿ ಷಿರಾಜ್ó ನಗರವನ್ನಾರಿಸಿಕೊಂಡ. ಕಾಜಾರ್ ರಾಜವಂಶದ ಸ್ಥಾಪಕನಾದ ಆಘಾ ಮೊಹಮ್ಮದ್‍ಖಾನ್ ಟೇಹ್‍ರಾನಿಗೆ ಮುತ್ತಿಗೆ ಹಾಕಿ ಇದನ್ನು ಹಿಡಿದುಕೊಂಡ (1785). ಅಂದಿನಿಂದ ಇದು ರಾಜಧಾನಿಯಾಗಿದೆ.

	ಮೊದಲು ಈ ನಗರ ಹನ್ನೆರಡು. ಅಲಂಕೃತ ದಿಡ್ಡಿಬಾಗಿಲುಗಳನ್ನೊಳಗೊಂಡ ಗೋಡೆಯೊಂದರಿಂದ ಆವೃತವಾಗಿತ್ತು. 1869 ರಲ್ಲಿ ನಾಸಿರ್ ಎದ್-ದೀನ್-ಷಾ (1848-96) ಇದನ್ನು ವಿಸ್ತರಿಸಿದ. ಆದರೆ, ನಗರದ ವಿಕಾಸಕ್ಕೆ ಹೆಚ್ಚು ಹೆಚ್ಚು ಪ್ರದೇಶ ಅಗತ್ಯವಾದುದರಿಂದ ರಿಜಾó ಷಾ ಪಹ್ಲವಿಯ (1877-1944) ಆಳ್ವಿಕೆಯ ಅವಧಿಯಲ್ಲಿ ಈ ಗೋಡೆಯನ್ನು ಒಡೆದುಹಾಕಲಾಯಿತು. ವಾಸ್ತವವಾಗಿ ಟೇಹ್‍ರಾನಿಗೆ ಆಧುನಿಕ ರೂಪ ಕೊಟ್ಟವರು ರಿಜಾóಷಾ ಮತ್ತು ಆತನ ಮಗ ಮೊಹಮದ್ ರಿಜಾó ಪಹ್ಲವೀ. ಎರಡನೆಯ ಮಹಾಯದ್ಧದ ಕಾಲದಲ್ಲಿ 1943 ರ ನವೆಂಬರ್ 23 ರಿಂದ ಡಿಸೆಂಬರ್ 2 ರವರೆಗೆ ಚರ್ಚಿಲ್. ರೂಸ್‍ವೆಲ್ಟ್ ಮತ್ತು ಸ್ಟಾಲಿನರು ಇಲ್ಲಿ ಸಭೆ ಸೇರಿದ್ದರು.

ಟೇಹ್‍ರಾನ್ ಓಸ್ತಾನ್ : ಟೇಹ್‍ರಾನ್ ಓಸ್ತಾನ್ ಅಥವಾ ಮಧ್ಯ ಪ್ರಾಂತ್ಯ ಎಲುeóರ್ï ಪರ್ವತಗಳ ಬಹುಭಾಗವನ್ನೂ ಒಳನಾಡಿನ ಬೆಟ್ಟಸೀಮೆಯ ಹಲವು ಜಿಲ್ಲೆಗಳನ್ನೂ ಮಹಾ ಮಧ್ಯ ಬಯಲಿನ ವಾಯುವ್ಯದ ಅಂಚನ್ನೂ ದಾರ್ಯಚಯ-ನಮಾಕ್ ಮರುಭೂಮಿ ಒಂದು ಭಾಗವನ್ನು ಒಳಗೊಂಡಿದೆ. ಇದು ಹನ್ನೆರಡು ಷಹರೀಸ್ತಾನ್‍ಗಳಾಗಿ ವಿಭಾಗವಾಗಿದೆ. ಇದರ ವಿಸ್ತೀರ್ಣ 36.139 ಚ.ಮೈ (93.600 ಚ.ಕಿಮೀ.). ಜನಸಂಖ್ಯ 49,79,081 (1966). ಇರಾನಿನ ಪ್ರಮುಖ ರೈಲುಮಾರ್ಗಗಳೂ ರಸ್ತೆಗಳೂ ಇದರ ಮೂಲಕ ಸಾಗುತ್ತವೆ. ಇರಾನಿನ ಸುಮಾರು ಮೂರನೆಯ ಒಂದರಷ್ಟು ಕೈಗಾರಿಕೆಗಳು ಈ ಪ್ರಾಂತ್ಯದಲ್ಲಿವೆ. ಜವಳಿ. ಸಕ್ಕರೆ. ಕಲ್ಲಿದ್ದಲು. ಗಣಿಗಾರಿಕೆ. ಆಬದಾನ್ ತೈಲಶುದ್ಧೀಕರಣ ಕೇಂದ್ರದಿಂದಲೂ ಕೋಮ್ ಬಳಿಯ ಅರ್ಬೋರ್ಜ್ ತೈಲಗಣಿಯಿಂದಲೂ ಇಲ್ಲಿಗೆ ತೈಲ ಕೊಳಾಯಿಗಳಿವೆ. ಕರಾಜ್ ಮತ್ತು ಲಾತಿಯ ಕಟ್ಟೆಗಳಿಂದ ನೀರಾವರಿ ಮತ್ತು ವಿದ್ಯುತ್ ಸೌಲಭ್ಯಗಳು ಏರ್ಪಟ್ಟಿವೆ.
(ಪಿ.ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ